ತರಕಾರಿಗಳನ್ನು ಸೋಂಕು ರಹಿತವನ್ನಾಗಿಸುವ ಸ್ಯಾನಿಟೈಸರ್‌ ಕಿಟ್‌ ಅಭಿವೃದ್ಧಿಪಡಿಸಿದ 14 ರ ಪೋರ – Online Article by YS Kannada – Aditya Pachpande
14-year-old Pune teen makes sanitiser kit for sterilising groceries, obtains patent – Online Article by The Indian Express
October 6, 2020
14-Year-Old Designs Sanitiser Kit For Sterilisation Of Vegetables, Receives Patent – Online Article by The Logical Indian
October 6, 2020

ತರಕಾರಿಗಳನ್ನು ಸೋಂಕು ರಹಿತವನ್ನಾಗಿಸುವ ಸ್ಯಾನಿಟೈಸರ್‌ ಕಿಟ್‌ ಅಭಿವೃದ್ಧಿಪಡಿಸಿದ 14 ರ ಪೋರ – Online Article by YS Kannada

ತರಕಾರಿಗಳನ್ನು ಸೋಂಕು ರಹಿತವನ್ನಾಗಿಸುವ ಸ್ಯಾನಿಟೈಸರ್‌ ಕಿಟ್‌ ಅಭಿವೃದ್ಧಿಪಡಿಸಿದ 14 ರ ಪೋರ

Online Article by YS Kannada, Date: 06.10.2020

Know More : https://yourstory.com/kannada/14-year-old-teen-design-sanitiser-kit-covid

ಕೊರನಾವೈರಸ್‌ ದಾಳಿಯು ನಮ್ಮ ಜೀವನ ಶೈಲಿಯಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದೆ. ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್‌ ಧರಿಸುವುದರಿಂದ ಹಿಡಿದು, ನಿರಂತರವಾಗಿ ಸ್ಯಾನಿಟೈಸರ್‌ನಿಂದ ಕೈತೊಳೆದುಕೊಳ್ಳುವುದು, ನಾವು ಬಳಸುವ ವಸ್ತುಗಳನ್ನು ಶುಚಿಗೊಳಿಸುವುದು ಹೀಗೆ ನಾವೆಲ್ಲ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುತ್ತಿದ್ದೇವೆ.

ಈ ನಿಟ್ಟಿನಲ್ಲಿ ಪುಣೆಯ ಇಂಡಸ್‌ ಇಂಟರ್‌ನ್ಯಾಷನಲ್‌ ಶಾಲೆಯ 11 ನೇ ತರಗತಿ ವಿದ್ಯಾರ್ಥಿ ಆದಿತ್ಯ ದೇಶಪಾಂಡೆ ಸುರಕ್ಷಾ ಕಿಟ್‌ ಎಂಬ ಸೋಂಕು ಹಾರಕವನ್ನು ಅಭಿವೃದ್ಧಿಪಡಿಸಿದ್ದು, ಇದು ಯುವಿ-ಸಿ ಕಿರಣಗಳನ್ನು ಬಳಸಿಕೊಂಡು ಕೊರೊನಾವೈರಸ್‌ ಅನ್ನು ಕೊಲ್ಲುತ್ತದೆ, ವರದಿ ದಿ ಲಾಜಿಕಲ್‌ ಇಂಡಿಯನ್‌.

ಆದಿತ್ಯಾ ಪಚ್ಪಾಂಡೆ (ಚಿತ್ರಕೃಪೆ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌)

ಪಾಚಿ ಆಧಾರಿತ ಈ ವಾಯು ಶುದ್ಧೀಕರಣವು 98 ಪ್ರತಿಶತದಷ್ಟು ಹಾನಿಕಾರಕ ಅನಿಲಗಳನ್ನು ತಟಸ್ಥಗೊಳಿಸಿ, ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ

ಸ್ಪೆಸ್‌ಎಕ್ಸ್‌ನ ಮುಖ್ಯ ವಿನ್ಯಾಸಕಾರ ಎಲೊನ್‌ ಮಸ್ಕ್‌ ಅವರಿಂದ ಸ್ಪೂರ್ತಿ ಪಡೆದಿರುವ ಆದಿತ್ಯ, ತನ್ನ ಕಿಟ್‌ಗೆ ಅದಾಗಲೆ ಪೆಟೆಂಟ್‌ ಪಡೆದುಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ವೈಜ್ಞಾನಿಕ ಮಂಡಳಿ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯಿಂದ ಯುವಿ-ಸಿ ಸೋಂಕು ನಿವಾರಕ ಚಟುವಟಿಕೆಗಳಿಗಾಗಿ ಈ ಉತ್ಪನ್ನ ಬಳಸಬಹುದೆಂದು ಅನುಮತಿಯೂ ದೊರಕಿದೆ.

ಪ್ರಸ್ತುತ ಆದಿತ್ಯ ಮುಂಬೈ ನಗರದ ದಾದರನ ತರಕಾರಿ ಮಾರುಕಟ್ಟೆಗಳಲ್ಲಿ ಉಚಿತವಾಗಿ ಈ ಕಿಟ್‌ಗಳನ್ನು ವಿತರಿಸುತ್ತಿದ್ದಾನೆ. ಈ ಕಿಟ್‌ ಎಲ್ಲ ಮನೆಗಳು ಎದುರಿಸುತ್ತಿರುವ ಮುಖ್ಯ ಸಮಸ್ಯೆಯಾದ ತರಕಾರಿಗಳ ಶುದ್ಧಿರಣದ ಗೋಳನ್ನು ನಿವಾರಿಸುತ್ತದೆ.

“ಸಾಂಕ್ರಾಮಿಕದ ನಡುವೆ ತರಕಾರಿಗಳ ಶುದ್ಧೀಕರಣ ಹೇಗೆ ಮಾಡಬೇಕೆಂಬ ಯೋಚನೆ ಬಂದಿತು. ನಾನು ಅಲ್ಯೂಮಿನಿಯಂ ಬಳಸಿ ನನ್ನ ಸ್ವಂತ ಸಂಶೋಧನೆ ಮಾಡುತ್ತಾ, ಪೊಟ್ಯಾಸಿಯಮ್ ಪರ್ಮಾಂಗನೇಟ್ ಬಳಸಿ ಮತ್ತು ಸೂರ್ಯನ ಬೆಳಕಿಗೆ ಒಡ್ಡಿ ಅದನ್ನು ನಿಯಂತ್ರಿತ ಪರಿಸರದಲ್ಲಿ ಹೇಗೆ ಬಳಸಬಹುದು ಎಂದು ನೋಡಿದೆ, ಅಂತಿಮವಾಗಿ ಸ್ಯಾನಿಟೈಸರ್ ಬಾಕ್ಸ್‌ ತಯಾರಾಯ್ತು,” ಎಂದು ಆದಿತ್ಯ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಸಿಎಸ್‍ಐಆರ್-ಸಿಎಮ್‌ಇಆರ್‌ಐನಿಂದ ಆದಿತ್ಯ ಅಂತಿಮ ಮೌಲ್ಯಮಾಪನ ವರದಿಯನ್ನು ಪಡೆದ ನಂತರ, ಇದೇ ರೀತಿಯ 1,000 ಕ್ಕೂ ಹೆಚ್ಚು ಸ್ಯಾನಿಟೈಸೇಶನ್ ಪೆಟ್ಟಿಗೆಗಳನ್ನು ತಯಾರಿಸಿ, ಸಮಾಜದ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ವಿತರಿಸಲು ಯೋಚಿಸುತ್ತಿದ್ದಾನೆ.